ಪ್ರೇಮ್ ಕುಮಾರ್ ಅಲೆ (ಜನನ ೨೬ ಸೆಪ್ಟೆಂಬರ್ ೧೯೮೭) ಒಬ್ಬ ಮಾಜಿ ಭಾರತೀಯ ಸೇನೆಯ ಸೈನಿಕ ಮತ್ತು ಭಾರತೀಯ ವೃತ್ತಿಪರ ಪ‍್ಯಾರಾ-ಬ್ಯಾಡ್ಮಿಂಟನ್ ಆಟಗಾರ. ಅವರು ೨೦೧೪ ರಲ್ಲಿ ಮೊದಲ ಬಾರಿಗೆ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲಿ ಭಾಗವಹಿಸಿದರು. ಪ್ರಸ್ತುತ ಅವರು ಪುರುಷರ ಡಬಲ್ಸ್‌ನಲ್ಲಿ ೬ ನೇ ಸ್ಥಾನದಲ್ಲಿದ್ದಾರೆ. ಮಿಶ್ರ ಸಿಂಗಲ್ಸ್‌ನಲ್ಲಿ ೯ ನೇ ಸ್ಥಾನದಲ್ಲಿದ್ದಾರೆ ಮತ್ತು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಪ‍್ಯಾರಾ-ಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಟ್ಟಿಯಲ್ಲಿ ಪುರುಷರ ಡಬಲ್ಸ್‌ನಲ್ಲಿ ೧೫ ನೇ ಸ್ಥಾನದಲ್ಲಿದ್ದಾರೆ. ೨೦೧೮ ರಲ್ಲಿ, ಅವರು ಪುರುಷರ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್‌ನ ರಾಷ್ಟ್ರೀಯ ಚಾಂಪಿಯನ್ ಆದರು (ಅವರ ಡಬಲ್ಸ್ ಪಾಲುದಾರ ಅಬು ಹುಬೈದಾ ಅವರೊಂದಿಗೆ ). ೨೦೧೯ ರಲ್ಲಿ, ಅವರು ಬಿ.ಡಬ್ಲ್ಯೂ.ಎಫ್. ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ ಶ್ರೇಯಾಂಕದ ಥಾಮಸ್ ವಾಂಡ್‌ಸ್ನೈಡರ್ ಅವರನ್ನು ಸೋಲಿಸಿದರು. ಅವರು ೨೦೨೧ ರಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ದುಬೈ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಗೆದ್ದರು. == ಸಾಧನೆಗಳು == ಚಿನ್ನದ ಪದಕ (ಮಿಶ್ರ ಡಬಲ್ಸ್) - ಪೆರು ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೦. ಚಿನ್ನದ ಪದಕ (ಮಿಶ್ರ ಡಬಲ್ಸ್) - ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. ಬೆಳ್ಳಿ ಪದಕ (ಪುರುಷರ ಡಬಲ್ಸ್) - ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. ಬೆಳ್ಳಿ ಪದಕ (ಪುರುಷರ ಡಬಲ್ಸ್) - ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. ಬೆಳ್ಳಿ ಪದಕ (ಮಿಶ್ರ ಡಬಲ್ಸ್) - ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. ಕಂಚಿನ ಪದಕ (ಪುರುಷರ ಸಿಂಗಲ್ಸ್) - ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೯. ಕಂಚಿನ ಪದಕ (ಪುರುಷರ ಡಬಲ್ಸ್)- ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೫. ಕಂಚಿನ ಪದಕ (ಪುರುಷರ ಡಬಲ್ಸ್)- ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೫. ಕಂಚಿನ ಪದಕ (ಪುರುಷರ ಸಿಂಗಲ್ಸ್) - ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. ಕಂಚಿನ ಪದಕ (ಪುರುಷರ ಡಬಲ್ಸ್) - ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೨. ಕಂಚಿನ ಪದಕ (ಪುರುಷರ ಡಬಲ್ಸ್) -ಐ.ಬಿ.ಇ.ಆರ್.ಇ.ಡಿ.ಆರ್.ಒ.ಎಲ್.ಎ. ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೨. == ಅಂತರರಾಷ್ಟ್ರೀಯ ಭಾಗವಹಿಸುವಿಕೆ == === ೨೦೧೪ === ಇಂಡೋನೇಷ್ಯಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೪ ಸುರಕರ್ತಾ ಇಂಡೋನೇಷ್ಯಾ. === ೨೦೧೫ === ಬಿ.ಡಬ್ಲ್ಯೂ.ಎಫ್. ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ೨೦೧೫ ಐಲ್ಸ್‌ಬರಿ ಇಂಗ್ಲೆಂಡ್. ಇಂಡೋನೇಷ್ಯಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೫ ಸುರಕರ್ತಾ ಇಂಡೋನೇಷ್ಯಾ. ವಿ ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೫ ಅಲ್ಕುಡಿಯಾ ಸ್ಪೇನ್. === ೨೦೧೬ === ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ೨೦೧೬ ಬೀಜಿಂಗ್ ಚೀನಾ. === ೨೦೧೭ === ಬಿ.ಡಬ್ಲ್ಯೂ.ಎಫ್. ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ೨೦೧೭ ಉಲ್ಸಾನ್ ಕೊರಿಯಾ. === ೨೦೧೮ === ಏಷ್ಯನ್ ಪ್ಯಾರಾ ಗೇಮ್ಸ್ ೨೦೧೮ ಜಕಾರ್ತಾ ಇಂಡೋನೇಷ್ಯಾ. === ೨೦೧೯ === ಬಿ.ಡಬ್ಲ್ಯೂ.ಎಫ್. ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ೨೦೧೯ ಬಾಸೆಲ್ ಸ್ವಿಟ್ಜರ್ಲೆಂಡ್. ಥೈಲ್ಯಾಂಡ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೯ ಬ್ಯಾಂಕಾಕ್ ಥೈಲ್ಯಾಂಡ್. ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೯ ಕಂಪಾಲಾ ಉಗಾಂಡಾ. ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೮ ದುಬೈ ಯುಎಇ. === ೨೦೨೦ === ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೦ ಸಾವೊ ಪಾಲೊ ಬ್ರೆಜಿಲ್. ಪೆರು ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೦ ಲಿಮಾ, ಪೆರು. === ೨೦೨೧ === ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧, ದುಬೈ ಯುಎಇ. ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧, ಕಂಪಾಲಾ ಉಗಾಂಡಾ. === ೨೦೨೨ === ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೨. ಐ.ಬಿ.ಇ.ಆರ್.ಇ.ಡಿ.ಆರ್.ಒ.ಎಲ್.ಎ. ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೨. == ಉಲ್ಲೇಖಗಳು ==